Thursday, 21 August 2025

ದೇವರ ಮನೆ 'ಚಾರಣ ಮತ್ತು ಕುರಿಂಜಿ ಹೂವು'

 ದೇವರ ಮನೆ 'ಚಾರಣ ಮತ್ತು  ಕುರಿಂಜಿ ಹೂವು'

ಟಿಪ್ಪಣಿ: ಕನ್ನಡ ಲೇಖಕರು, ಸಂಸ್ಕೃತಿ ಚಿಂತಕರೂ ಆದ ರಹಮತ್ ತರೀಕೆರೆ ಅವರು 2015 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮಲೆನಾಡಿನ ಐತಿಹಾಸಿಕ ತಾಣ ದೇವರ ಮನೆಗೆ ಕುರಿಂಜಿ ಹೂವು ನೋಡಲು ಪ್ರೇಕ್ಷಕನಾಗಿ ಬಂದಿದ್ದರು. ಕುರಿಂಜಿ ಹೂವು ಕುರಿತಂತೆ ಅವರು ಆ ನಂತರ ಬರೆದ ಲೇಖನ "ದೇವರ ಮನೆಯಲ್ಲಿ ಕುರಿಂಜಿ ಧ್ಯಾನ" ಮಯೂರ ಮಾಸಿಕದಲ್ಲಿ ಪ್ರಕಟವಾಗಿ ಅಪಾರ ಜನಪ್ರಿಯತೆ ಪಡೆಯಿತು. ಇದು ಕನ್ನಡದಲ್ಲಿ ಕುರಿಂಜಿ ಕುರಿತಂತೆ ಬರೆದ ಮೊಟ್ಟಮೊದಲ ಸುದೀರ್ಘ ಲೇಖನ ಎಂಬುವುದೂ ಕೂಡ ವಿಶೇಷವೇ! ಕೆಲವೇ ತಿಂಗಳುಗಳಲ್ಲಿ ನಾನು ಸಂಪತ್ ಬೆಟ್ಟಗೆರೆ ಬರೆದ "ದೇವರ ಮನೆ ಚಾರಣದಲ್ಲಿ"  ಲೇಖನವು ಸುಧಾ ಮಾಸಿಕದಲ್ಲಿ ಪ್ರಕಟವಾಗಿ ಅಷ್ಟೇ ಜನಪ್ರೀತಿಯನ್ನು ಪಡೆಯಿತು. ಇದು ಒಬ್ಬ ಹಿರಿಯ(ರಹಮತ್ ತರೀಕೆರೆ) - ಇನ್ನೊಬ್ಬ ಕಿರಿಯ (ಸಂಪತ್ ಬೆಟ್ಟಗೆರೆ)  ವಯೋಮಾನದ  ಲೇಖಕರ ಒಡನಾಟ, ತಿರುಗಾಟ, ಅಕ್ಷರ ಪುಟದ ಜುಗಲ್ ಬಂದಿ ಕೂಡ ಎಂಬ ಮನೋಭೂಮಿಕೆ ನನ್ನದು. ಈಗ ಈ 2025 ಕ್ಕೆ 10 ವರ್ಷದ ಹಿಂದಿನ ಪ್ರೀತಿಯ ಪಯಣವನ್ನೂ ನಿರೂಪಿಸುವಂತಿರುವ ಈ ಎರಡೂ ಲೇಖನಗಳನ್ನು ಇಲ್ಲಿ ಮತ್ತೆ ಓದಬಹುದು. ಈ ಎರಡೂ ಲೇಖನಗಳಿಗೂ ಚೆಂದದ ಛಾಯಾಚಿತ್ರ ಒದಗಿಸಿದ್ದ ಪರಿಸರ ಸ್ನೇಹಿ ಛಾಯಾಚಿತ್ರಕಾರ ಕಲೀಮ್ ಉಲ್ಲಾ ಅವರಿಗೂ ಆಭಾರಿ.  

(ಓದಿನ ಸ್ಪಷ್ಟತೆಗೆ ಪ್ರತಿ ಓದಿನ ಫೋಟೋ ಪೇಜ್ ಮೇಲೆ ಟಚ್ ಮಾಡಿ ಓದಿರಿ) 

1.ರಹಮತ್ ತರೀಕೆರೆ ಲೇಖನ "ದೇವರ ಮನೆಯಲ್ಲಿ ಕುರಿಂಜಿ ಧ್ಯಾನ"📝

 






2. ಸಂಪತ್ ಬೆಟ್ಟಗೆರೆ ಲೇಖನ 
"ದೇವರ ಮನೆ ಚಾರಣದಲ್ಲಿ"📝


ನಿಮ್ಮ ಓದಿನ ಆತ್ಮೀಯತೆಗೆ ಧನ್ಯ. ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ಬರೆಯಿರಿ.



No comments:

Post a Comment