Saturday, 18 October 2025

ಎಸ್.ಎಲ್.ಭೈರಪ್ಪನವರ ಭಾವಭಿತ್ತಿ

ಎಸ್.ಎಲ್.ಭೈರಪ್ಪನವರ ಭಾವಭಿತ್ತಿ

ಕನ್ನಡದ ಹಿರಿಯ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ಕುರಿತಂತೆ ನಾನು ಬರೆದಿದ್ದ ವಿಶೇಷ ಲೇಖನ 'ಕಸ್ತೂರಿ' ಮಾಸಿಕದ ನವೆಂಬರ್ ತಿಂಗಳ  2025ರ ಸಂಚಿಕೆಯಲ್ಲಿ ಪ್ರಕಟವಾಗಿದ್ದನ್ನು ನಿಮ್ಮೆಲ್ಲರ ಪ್ರೀತಿಯ ಬಿಡುವಿನ ವೇಳೆಯ ಓದಿಗಾಗಿ  ಇಲ್ಲಿ ನೀಡಲಾಗಿದೆ. 

(ಓದಿನ ಸ್ಪಷ್ಟತೆಗೆ ಪ್ರತಿ ಲೇಖನದ  ಫೋಟೋ ಪೇಜ್ ಮೇಲೆ ಟಚ್ ಮಾಡಿ ನೋಡಿರಿ ಜೂಮ್ ನಲ್ಲಿ ಹೊಂದಿಸಿಕೊಂಡು ಓದಿರಿ.) 

















Tuesday, 7 October 2025

ತಂದೆ ವಾಲ್ಮೀಕಿ ಧನ್ಯೆ ಜಾನಕಿ!

 -ಕವನ-

 ತಂದೆ ವಾಲ್ಮೀಕಿ ಧನ್ಯೆ ಜಾನಕಿ!















ಆದಿಕವಿ 
ಭಾರತದ ವಾಲ್ಮೀಕಿ 
ಜನಕನ ಮಗಳು
ಜಾನಕಿ
ಅವನ ಪ್ರೀತಿಯ ಕಾವ್ಯಕ್ಕೆ 
ಕಥಾ ನಾಯಕಿ!

ಜಾನಕಿ ಪತಿ ಶ್ರೀರಾಮನ ಉದಾಹರಣೆ ಇಲ್ಲಿದೆ 
ಅದಕ್ಕೊಂದು ಹೆಸರು ಮೂಡಿದೆ ಅದೇ ರಾಮಾಯಣ!
ಅವನೊಬ್ಬ ಲಂಕಾ ರಾವಣ
ಅವನಿಂದ 
ಜಾನಕಿಯ ಅಪಹರಣ!
ಹೋರಾಟ ನಡೆಸಿ 
ಆಕೆಯ ಬಿಡಿಸಿ 
ಹೀಗೆ ವನವಾಸ 
ಹಾಗೆ ಅಜ್ಞಾತವಾಸ
ಎಲ್ಲಾ ಮುಗಿಸಿ.. 
ಗರ್ಭಿಣಿ ಜಾನಕಿ ಮತ್ತೆ ಕಾಡಿಗೆ
ಹೀಗೆ ಹೃದಯಕ್ಕೆ ಸಂಬಂಧಿಸಿದೆ ಇದು ಓದಿಗೆ!
ವಾಲ್ಮೀಕಿ ಆಶ್ರಯದಲ್ಲಿ ಅವಳಿಗೆ ನೋವಿನ ಹೆರಿಗೆ
ಜನನಿ ಜಾನಕಿ ಮತ್ತೆ ಮತ್ತೆ ಹೀಗೆ ಜಾನಕಿ.. ಬರವಣಿಗೆಗೆ! 
ಹಾಗೆ ಮಹಾಕಾವ್ಯ ರಾಮಾಯಣ 
ಒಂದು ಸಾಂಸಾರಿಕ ಬದುಕಿನ ಪಯಣದ ಅನಾವರಣ! 
  
ಇಂದು ಕವಿ ಗೌರವದ ವಾಲ್ಮೀಕಿ ಜಯಂತಿ  ಆಚರಣೆ 
ಈ ಕಾವ್ಯ ಓದಿದವರು ಕೆಲವೇ ಜನ ಮಾತ್ರವಿಲ್ಲಿ ಜಾಣೆ! 
ಆದರೆ  ಅವರ ಮಾತುಕತೆ ಭಾಷಣ 
ಒಬ್ಬೊಬ್ಬರದು ಒಂದೊಂದು  ವಿಮರ್ಶೆಯ ನವಬಾಣ! 
"ವಾಲ್ಮೀಕಿ ಹಾಗಂತೆ ಹೀಗಂತೆ..." 
ಅವೆಲ್ಲ ಈಗ ಯಾಕಂತೆ!?
'ವಾಲ್ಮೀಕಿ ಒಬ್ಬ ಕವಿ' ನಮಗಿಷ್ಟೇ ಈಗ ಸಾಕಂತೆ. 
ಉಳಿದಂತೆ... 
ನಾವೆಲ್ಲಾ 'ರಾಮಾಯಣ' ಕಾವ್ಯ  ಓದಿ ತಿಳಿದಂತೆ 
ವಾಲ್ಮೀಕಿ ಪ್ರಾಣಭಾವಕ್ಕೂ ತುಂಬಾ ಖುಷಿಯಂತೆ! 
ಹೀಗೆ ಸಾಹಿತ್ಯ ಚರಿತ್ರೆಯಲ್ಲಿ ಆತ 
ನಮ್ಮ ಕವಿಗಳ ಮುತ್ತಾತ.. 
ಮತ್ತೇ? 
ಜವಾಬ್ದಾರಿ ತಂದೆ,ಧನ್ಯಳು ಆ ಸೀತೆ!
-ರಚನೆ: ಡಾ.ಸಂಪತ್ ಬೆಟ್ಟಗೆರೆ




 


Saturday, 27 September 2025

ಮೂಡಿಗೆರೆ ಸ್ಥಳನಾಮಗಳು

ಮೂಡಿಗೆರೆ ಸ್ಥಳನಾಮಗಳು 

ವಿಶೇಷ ಲೇಖನ: ಲೇಖಕರು: ಡಾ.ಸಂಪತ್ ಬೆಟ್ಟಗೆರೆ 

2007 ರಲ್ಲಿ ಮೂಡಿಗೆರೆಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷ ಸ್ಮರಣ ಸಂಚಿಕೆ 'ಹೊಯ್ಸಳ ಸಿರಿ'ಯಲ್ಲಿ ನಾನು ಬರೆದಿದ್ದ ವಿಶೇಷ ಲೇಖನ "ಮೂಡಿಗೆರೆ ಸ್ಥಳನಾಮಗಳು" ಇಲ್ಲಿ ನಿಮ್ಮ ಪ್ರೀತಿಯ ಓದಿಗಾಗಿ ಒದಗಿಸಿದ್ದೇನೆ. ಓದಿ ಅನಿಸಿಕೆ ತಿಳಿಸಿ. ಆಗ ನಾನು ವಿದ್ಯಾರ್ಥಿಯಾಗಿದ್ದಾಗ ಬರೆದ ಲೇಖನವಿದು ಎಂಬ ವಿನಯ ಮತ್ತು ಪ್ರೀತಿಯ ಆಂತರ್ಯವನ್ನು ಇದು ಮೈಗೂಡಿಸಿಕೊಂಡು ಒಡಮೂಡಿರುತ್ತೆ ಎಂಬ ಪರಿಕಲ್ಪನೆ ನಿಮ್ಮ ಓದಿನ ವಿಮರ್ಶೆಯಲ್ಲಿರಲಿ ಎಂಬುದು ನನ್ನ ಆತ್ಮೀಯ ಸದಾಶಯವಾಗಿದೆ. 































ಮೂಡಿಗೆರೆಯ ಕೆಲವು ಊರುಗಳ ಮಾರ್ಗಸೂಚಿ ಉದಾಹರಣೆಗೆ ಮಾದರಿಯ ಸಾಂದರ್ಭಿಕ ಛಾಯಾಚಿತ್ರ. 

(ಲೇಖನದ ಓದಿನ ಸ್ಪಷ್ಟತೆಗಾಗಿ ಪ್ರತಿ ಫೋಟೋ ಪೇಜ್ ಮೇಲೆ ಟಚ್ ಮಾಡಿ ನೋಡಿರಿ. ಜೂಮ್ ಮಾಡಿ ಓದಿರಿ.)

(ಗಮನಿಸಿ: ಮೂಲ ಲೇಖಕರ ಪೂರ್ವಾನುಮತಿ ಇಲ್ಲದೆ ಈ ಲೇಖನವನ್ನು ನಕಲು ಮಾಡುವಂತಿಲ್ಲ.ಡಾ.ಸಂಪತ್ ಬೆಟ್ಟಗೆರೆ. ಮೊ:935305706 7)



Friday, 12 September 2025

ಕವನ: ಗುಂಪುಗಾರಿಕೆ! -ರಚನೆ:ಡಾ.ಸಂಪತ್ ಬೆಟ್ಟಗೆರೆ

-ಕವನ-

ಗುಂಪುಗಾರಿಕೆ!

ಟೀಚರ್ಸ್ ಮತ್ತು ವಿದ್ಯಾರ್ಥಿಗಳ ಸಾಂದರ್ಭಿಕ ಚಿತ್ರ.(ಚಿತ್ರಕೃಪೆ:ಇಂಟರ್ನೆಟ್)

ಪಾದ್ರಿ ನಿಂತಿದ್ದರು 
ಅವರ ಸುತ್ತಲೂ ಕ್ರಿಶ್ಚಿಯನ್ನರು!
ಮೌಲ್ವಿ ನಿಂತಿದ್ದರು 
ಅವರ ಸುತ್ತಲೂ ಮುಸ್ಲಿಮರು!
ಸ್ವಾಮಿಗಳು ನಿಂತಿದ್ದರು 
ಅವರ ಸುತ್ತಲೂ ಹಿಂದೂ ಸಮುದಾಯದವರು! 
ಹೀಗೆ ಆಯಾ ಧರ್ಮದ ಗುರುಗಳು ಮತ್ತು ಜನರು
ಬೇರೆ ಬೇರೆ ಗುಂಪು ಗುಂಗಿನಲ್ಲಿ ಪ್ರತ್ಯೇಕರು! 

ನಮ್ಮ ಕನ್ನಡ ಗೌರ್ಮೇಂಟ್ ಶಾಲೆಯ ಶಿಕ್ಷಕರು 
ಸ್ವಾತಂತ್ರ್ಯ ದಿನಾಚರಣೆಯಂದು ಸಿಹಿ ಹಂಚುತಿದ್ದರು! 
ಅವರ ಜಾತಿ, ಧರ್ಮ ಅದಾವುದೋ, ಮುಗುಳ್ನಕ್ಕರು
ನಂಗೂ ಒಂದ್ ಮೈಸೂರು ಪಾಕ ಕೈಗಿತ್ತು ನೋಡಿದರು! 
ಎಲ್ಲಾ ವಿದ್ಯಾರ್ಥಿಗಳು ಅಭೇದವಾಗಿ ಸಾಲಗಿ ನಿಂತರು
ಕೆಲವರು ಮಂಡಿಯೂರಿ ಕುಳಿತು ಫೋಟೋ ತೆಗೆದರು! 
ಸರ್ವ ಜನಾಂಗದ ಶಾಂತಿತೋಟ ನಾಡಗೀತೆ ನುಡಿದರು
ಎಲ್ಲರೂ ಹಾಗೇ ಜನಗಣಮನ ರಾಷ್ಟ್ರಗೀತೆ ಹಾಡಿದರು!

ಹೀಗೆ ಮಕ್ಕಳು ಶಿಕ್ಷಕರು
ಕನ್ನಡ ಶಾಲೆಯೇ ನಿಜವಾದ ಬಂಧು ಬಳಗದ ತವರು!
ಹಾಗೇ ಅಕ್ಕರೆ ಸಕ್ಕರೆಯ ಅಕ್ಷರ ಕಲಿತವರು 
ಮತ್ತೇಕೋ ಗೊತ್ತಿಲ್ಲ! ಪ್ರತ್ಯೇಕ ಗುಂಪಾಗಿ ಚದುರಿದರು! 

ನಮ್ಮ ಶಿಕ್ಷಕರು 
ಈಗ ನಿವೃತ್ತರು 
ಈ ಪ್ರಯುಕ್ತ ಅವರೀಗ ಸನ್ಮಾನಿತರು 
ಈ ಸನ್ಮಾನ ಮಾಡುತ್ತಿರುವರು
ಅವರದೇ ಜಾತಿ ಧರ್ಮವರು
ಅದೇ ಆ ನಮ್ಮ ಮೇಷ್ಟರು 
ನೋಡಿ ಜಾತಿಧರ್ಮದೊಳಗೇ ಪ್ರತ್ಯೇಕರಾಗಿದ್ದವರು
ಆದರೆ ಅವರು ವೃತ್ತಿ ಜೀವನದಲ್ಲಿ ಮಾತ್ರ ಜಾತ್ಯಾತೀತರು?
ಈಗ ನಿವೃತ್ತಿಯಲ್ಲಿ ಅವರ ಸಮುದಾಯದ ಶ್ರೇಷ್ಠ ಸಾಧಕರು 
ಅದಕ್ಕೀಗ ಅವರ ವಿದ್ಯಾರ್ಥಿಗಳಿಗೂ ತುಂಬಾ ಬೇಜಾರು! 
ಇಲ್ಲಿಯವರೆಗೆ ನಮ್ಮ ಗುರುಗಳು ನಮ್ಮವರಾಗಿದ್ದರು
ಈಗ ಮತ್ತೆ ಬೇರೆ ಹೋದರು! 
ಹೋದರೆ ಹೋಗಲಿ ನಾವು ಅವರ ಹಾಗೇ ಸಾಗುವವರು-
ಎಂದು ಅವರದೇ ಧರ್ಮ ಜಾತಿಯೊಳಗೆ ಸೇರಿಕೊಂಡರು!

ಹೀಗೆ 'ಮಾನವ ಜಾತಿ ತಾನೊಂದೆ ವಲಂ' ಪಂಪರು
'ವಿಶ್ವಮಾನವ' ಕುವೆಂಪುರವರು
'ಕುಲ ಕುಲವೆಂದು ಹೊಡೆದಾಡದಿರಿ' ಎಂದ ಕನಕದಾಸರು
'ಜ್ಯೋತಿ ಯಾವ ಜಾತಿಯಮ್ಮ..' ಹಾಡಿದ ಪುರಂದರು
ಪಾಠ, ಪಠ್ಯ, ಉಪನ್ಯಾಸದ ಪ್ರೋಗ್ರಾಂಗೆ ಮೀಸಲಾದರು
ನಮ್ಮ ಮೇಷ್ಟರು ಅದೇ ಎಷ್ಟು ಚಂದ ಬೋಧಿಸುತ್ತಿದ್ದರು! 
ಬಸವ, ಬುದ್ಧ, ವಿವೇಕಾನಂದರು, ಸಂತ ಕಬೀರರು
ಶರೀಫರು, ಗೋವಿಂದ ಭಟ್ಟರು,  ತೆರೆಸಾರು, ಕಲಾಂರು
ಬರೀ ಹೇಳಲಿಲ್ಲ ಬದುಕಿ ಕೂಡ ತೋರಿಸಿಕೊಟ್ಟಿದ್ದರು
ನಾವು ಮತ್ತೆ ಮೇಷ್ಟರಂತೆ ಗುಂಪು ಸೇರಿ ಚೂರಾದವರು! 

-ರಚನೆ:ಡಾ.ಸಂಪತ್ ಬೆಟ್ಟಗೆರೆ
 

Thursday, 28 August 2025

"ಅಮ್ಮ ಕಲಿಸಿದ ಆ ಪಾಠ" ವಿಶೇಷ ಲೇಖನ, "ಅಮ್ಮ ಗುಮ್ಮ" ಕವನ

"ಅಮ್ಮ ಕಲಿಸಿದ ಆ ಪಾಠ" 

ವಿಶೇಷ ಲೇಖನ

ಪ್ರಜಾವಾಣಿ ಭೂಮಿಕಾದಲ್ಲಿ ಪ್ರಕಟಿತ 


"ಅಮ್ಮ ಗುಮ್ಮ" ಕವನ  

 ಅಮ್ಮನ ಹುಟ್ಟುಹಬ್ಬಕ್ಕೆ ಬರೆದ ವಿಶೇಷ ಕವನ



Monday, 25 August 2025

ಗೌರಿ ಗಣೇಶ ಹಬ್ಬ ಮತ್ತು ಗೌರಿ ಹೂವು

ಗೌರಿ ಗಣೇಶ ಹಬ್ಬ ಮತ್ತು ಗೌರಿ ಹೂವು 


 (ಓದಿನ ಸ್ಪಷ್ಟತೆಗೆ ಲೇಖನದ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. ಜೂಮ್ ನಲ್ಲಿ ಹೊಂದಿಸಿಕೊಂಡು ವೀಕ್ಷಣೆ ಮಾಡಿರಿ.) 


ನನ್ನ ಅಮ್ಮ (ಟಿ.ಎಸ್.ಗೀತಾ) ನೆನೆಹಾಕಿದ ಅಕ್ಕಿಯಿಂದ ಒನಕೆ ಮತ್ತು ಒಳ್ಳಿನ ಸಹಾಯದಿಂದ ಕುಟ್ಟಿ ಜರಡಿ ಹಿಡಿದ ಹಿಟ್ಟಿನ ಮೂಲಕ ರೂಪಿಸಿದ ವಿಶೇಷ ಗೌರಿ ಕಡುಬುವಿದು. ತದನಂತರ ಕಡುಬಿನ ತಪ್ಪಲೆ (ಪಾತ್ರೆ)ಯಲ್ಲಿ ಇಟ್ಟು ಹಬೆಯಲ್ಲಿ ಬೇಯಿಸಿರುವುದು.   


ಮಲೆನಾಡಿನ ವಿಶೇಷವಾಗಿ ಮೂಡಿಗೆರೆಯಲ್ಲಿ ಕೃಷಿಕ ಹಾಗೂ ರೈತ ಸಮುದಾಯ ಗೌರಿ ಗಣೇಶ ಹಬ್ಬದ ಸಂದರ್ಭ ಪೂಜಿಸುವ ಎಡಕಲು (ಪೂಜಾ ಸಮರ್ಪಣೆಯ ಎಡೆ ಕಳಸ) 






ಬಾಳ ಪಯಣದಲ್ಲಿ ಸ್ಫೂರ್ತಿ ತುಂಬಿದ ಉಪೇಂದ್ರಣ್ಣನ ಕೆಲವು ಸಿನಿಮಾಗಳು

ಬಾಳ ಪಯಣದಲ್ಲಿ ಸ್ಫೂರ್ತಿ ತುಂಬಿದ ಉಪೇಂದ್ರಣ್ಣನ ಕೆಲವು ಸಿನಿಮಾಗಳು

 ನಟ, ನಿರ್ದೇಶಕ ಉಪೇಂದ್ರ 

(ಓದಿನ ಸ್ಪಷ್ಟತೆಗಾಗಿ ಪ್ರತಿ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. ಜೂಮ್ ನಲ್ಲಿ ಹೊಂದಿಸಿಕೊಂಡು ವೀಕ್ಷಣೆ ಮಾಡಿರಿ.)   


ಮಲೆನಾಡು ಮಿಂಚು ಪತ್ರಿಕೆಯಲ್ಲಿ ಪ್ರಕಟಿತ ಲೇಖನ 


ವಿಜಯವಾಣಿ ಪತ್ರಿಕೆಯ ಕಿರು ಸಂದರ್ಶನದಲ್ಲಿ..

 

Saturday, 23 August 2025

ತರೀಕೆರೆ ಏರಿ ಮತ್ತು ಕತ್ತಿಯಂಚಿನ ದಾರಿ

ತರೀಕೆರೆ ಏರಿ 

ಮತ್ತು 

ಕತ್ತಿಯಂಚಿನ ದಾರಿ

ಕನ್ನಡದ ಪ್ರಮುಖ ಲೇಖಕ ರಹಮತ್ ತರೀಕೆರೆ ಅವರ ಕುರಿತಾಗಿ ನಾನು ನನ್ನ ಓದು ಮತ್ತು ಗ್ರಹಿಕೆಯ ಇತಿಮಿತಿಯಲ್ಲಿ ಬರೆದಿದ್ದ ಲೇಖನವಿದು. ಇದು ಚಿಕ್ಕಮಗಳೂರು ದರ್ಪಣ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಸ್ವತಃ ರಹಮತ್ ತರೀಕೆರೆ ಸರ್ ಕೂಡ ಈ ಲೇಖನ ಓದಿದ ಮೇಲೆ 'ಹೇಗಿದೆ ಸರ್ ಲೇಖನ?' ಎಂದು ಕೇಳಿದ್ದಾಗ ಒಂದಷ್ಟು ನನ್ನೊಂದಿಗೆ ಮುಕ್ತವಾಗಿ ಮೌಖಿಕ ಸಂವಹನ ಕೂಡ ನಡೆಸಿದ್ದರು. ಈಗ ಇದು ನಿಮ್ಮೆಲ್ಲರ ಪ್ರೀತಿಯ ಬಿಡುವಿನ ವೇಳೆಯ ಓದಿಗಾಗಿ ಇಲ್ಲಿ. 




ಲೇಖಕ ರಹಮತ್ ತರೀಕೆರೆಯವರು ಮತ್ತು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿಯ ಚಿತ್ರ.  

(ಓದಿನ ಸ್ಪಷ್ಟತೆಗೆ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. ಜೂಮ್ ನಲ್ಲಿ ಹೊಂದಿಸಿಕೊಂಡು ವೀಕ್ಷಣೆ ಮಾಡಿರಿ.) 

-ಪ್ರಕಟಿತ ಲೇಖನ- 

ವಿಶೇಷ ಸಂಯೋಜನೆ  ಮತ್ತು ಪರಿಕಲ್ಪನೆ 

 

Friday, 22 August 2025

ಕ್ಯಾನ್ಸರ್: ಮಿಡಿದ ಜೀವ ಇನ್ನಿಲ್ಲವೆಂದಾಗ (ಡಾ.ಸಣ್ಣರಾಮ ಅವರ ಅಳುನುಂಗಿ ನಗು ಒಮ್ಮೆ ಕೃತಿಯ ಕುರಿತು)

ಕ್ಯಾನ್ಸರ್:ಮಿಡಿದ ಜೀವ ಇನ್ನಿಲ್ಲವೆಂದಾಗ       (ಡಾ.ಸಣ್ಣರಾಮ ಅವರ "ಅಳುನುಂಗಿ ನಗು ಒಮ್ಮೆ" ಕೃತಿಯ ಕುರಿತು) 

ಟಿಪ್ಪಣಿ: ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ (ನಿವೃತ್ತ) ಕನ್ನಡ ಪ್ರಾಧ್ಯಾಪಕರು, ಸಂವೇದನಾಶೀಲ ಬರಹಗಾರರಾದ ಡಾ.ಸಣ್ಣರಾಮ ಅವರ ಅಪರೂಪದ ಕೃತಿ "ಅಳು ನುಂಗಿ ನಗು ಒಮ್ಮೆ" ಕೃತಿಯ ಅವಲೋಕನ ಇಲ್ಲಿದೆ. ಇದು ಮಂಗಳೂರಿನಿಂದ ಪ್ರಸಾರ ಆಗುತಿದ್ದ 'ಹೃದಯವಾಹಿನಿ ಪತ್ರಿಕೆ'ಯಲ್ಲಿ 14 ಮೇ 2013ರ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿತ್ತು. 

ಓದಿನ ಸ್ಪಷ್ಟತೆಗೆ ಲೇಖನದ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. ಜೂಮ್ ನಲ್ಲಿ ಹೊಂದಿಸಿಕೊಂಡು ವೀಕ್ಷಣೆ ಮಾಡಿರಿ.

 

               ಡಾ.ಸಣ್ಣರಾಮ



Thursday, 21 August 2025

ದೇವರ ಮನೆ 'ಚಾರಣ ಮತ್ತು ಕುರಿಂಜಿ ಹೂವು'

 ದೇವರ ಮನೆ 'ಚಾರಣ ಮತ್ತು  ಕುರಿಂಜಿ ಹೂವು'

ಟಿಪ್ಪಣಿ: ಕನ್ನಡ ಲೇಖಕರು, ಸಂಸ್ಕೃತಿ ಚಿಂತಕರೂ ಆದ ರಹಮತ್ ತರೀಕೆರೆ ಅವರು 2015 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮಲೆನಾಡಿನ ಐತಿಹಾಸಿಕ ತಾಣ ದೇವರ ಮನೆಗೆ ಕುರಿಂಜಿ ಹೂವು ನೋಡಲು ಪ್ರೇಕ್ಷಕನಾಗಿ ಬಂದಿದ್ದರು. ಕುರಿಂಜಿ ಹೂವು ಕುರಿತಂತೆ ಅವರು ಆ ನಂತರ ಬರೆದ ಲೇಖನ "ದೇವರ ಮನೆಯಲ್ಲಿ ಕುರಿಂಜಿ ಧ್ಯಾನ" ಮಯೂರ ಮಾಸಿಕದಲ್ಲಿ ಪ್ರಕಟವಾಗಿ ಅಪಾರ ಜನಪ್ರಿಯತೆ ಪಡೆಯಿತು. ಇದು ಕನ್ನಡದಲ್ಲಿ ಕುರಿಂಜಿ ಕುರಿತಂತೆ ಬರೆದ ಮೊಟ್ಟಮೊದಲ ಸುದೀರ್ಘ ಲೇಖನ ಎಂಬುವುದೂ ಕೂಡ ವಿಶೇಷವೇ! ಕೆಲವೇ ತಿಂಗಳುಗಳಲ್ಲಿ ನಾನು ಸಂಪತ್ ಬೆಟ್ಟಗೆರೆ ಬರೆದ "ದೇವರ ಮನೆ ಚಾರಣದಲ್ಲಿ"  ಲೇಖನವು ಸುಧಾ ಮಾಸಿಕದಲ್ಲಿ ಪ್ರಕಟವಾಗಿ ಅಷ್ಟೇ ಜನಪ್ರೀತಿಯನ್ನು ಪಡೆಯಿತು. ಇದು ಒಬ್ಬ ಹಿರಿಯ(ರಹಮತ್ ತರೀಕೆರೆ) - ಇನ್ನೊಬ್ಬ ಕಿರಿಯ (ಸಂಪತ್ ಬೆಟ್ಟಗೆರೆ)  ವಯೋಮಾನದ  ಲೇಖಕರ ಒಡನಾಟ, ತಿರುಗಾಟ, ಅಕ್ಷರ ಪುಟದ ಜುಗಲ್ ಬಂದಿ ಕೂಡ ಎಂಬ ಮನೋಭೂಮಿಕೆ ನನ್ನದು. ಈಗ ಈ 2025 ಕ್ಕೆ 10 ವರ್ಷದ ಹಿಂದಿನ ಪ್ರೀತಿಯ ಪಯಣವನ್ನೂ ನಿರೂಪಿಸುವಂತಿರುವ ಈ ಎರಡೂ ಲೇಖನಗಳನ್ನು ಇಲ್ಲಿ ಮತ್ತೆ ಓದಬಹುದು. ಈ ಎರಡೂ ಲೇಖನಗಳಿಗೂ ಚೆಂದದ ಛಾಯಾಚಿತ್ರ ಒದಗಿಸಿದ್ದ ಪರಿಸರ ಸ್ನೇಹಿ ಛಾಯಾಚಿತ್ರಕಾರ ಕಲೀಮ್ ಉಲ್ಲಾ ಅವರಿಗೂ ಆಭಾರಿ.  

(ಓದಿನ ಸ್ಪಷ್ಟತೆಗೆ ಪ್ರತಿ ಓದಿನ ಫೋಟೋ ಪೇಜ್ ಮೇಲೆ ಟಚ್ ಮಾಡಿ ಓದಿರಿ) 

1.ರಹಮತ್ ತರೀಕೆರೆ ಲೇಖನ "ದೇವರ ಮನೆಯಲ್ಲಿ ಕುರಿಂಜಿ ಧ್ಯಾನ"📝

 






2. ಸಂಪತ್ ಬೆಟ್ಟಗೆರೆ ಲೇಖನ 
"ದೇವರ ಮನೆ ಚಾರಣದಲ್ಲಿ"📝


ನಿಮ್ಮ ಓದಿನ ಆತ್ಮೀಯತೆಗೆ ಧನ್ಯ. ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ಬರೆಯಿರಿ.



Monday, 18 August 2025

ಅಂಬೇಡ್ಕರ್ ನುಡಿಮುತ್ತು ಮತ್ತು ವರ್ತಮಾನದ ಮನಸ್ಸು

ಅಂಬೇಡ್ಕರ್ ನುಡಿಮುತ್ತು 
ಮತ್ತು 
ವರ್ತಮಾನದ ಮನಸ್ಸು 
-ಡಾ.ಸಂಪತ್ ಬೆಟ್ಟಗೆರೆ
(ವಿಶೇಷ ಲೇಖನ - ಹೊಸತು ಮಾಸಿಕ, ಬೆಂಗಳೂರು) 
ಲೇಖನದ ಓದಿನ ಸ್ಪಷ್ಟತೆಗೆ ಪ್ರತಿ ಓದಿನ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. 











Wednesday, 6 August 2025

ಹೊಯ್ಸಳ ರಾಜಮನೆತನದ ತವರು ಮೂಡಿಗೆರೆಯ ಸೊಸೆಯೂರು

ಹೊಯ್ಸಳ ರಾಜಮನೆತನದ ತವರು 
ಮೂಡಿಗೆರೆಯ ಸೊಸೆಯೂರು 
*ಡಾ.ಸಂಪತ್ ಬೆಟ್ಟಗೆರೆ ವಿಶೇಷ ಲೇಖನ*


ಓದಿನ ಸ್ಪಷ್ಟತೆಗೆ ಲೇಖನದ ಫೋಟೋಪೇಜ್ ಮೇಲೆ
ಟಚ್ ಮಾಡಿ ಜೂಮ್ ಸ್ಕ್ರೀನ್ ನಲ್ಲಿ ಓದಿರಿ 


 

Friday, 20 June 2025

"ನೆನಪಿನ ಓಣಿಯಲ್ಲಿ ಜನಪದ ಶಿಶುಪ್ರಾಸಗಳು" ಕೃತಿ ವಿಮರ್ಶೆ : ಆನಂದ ವಿ. ಪಾಟೀಲ


ಕನ್ನಡ ಮಕ್ಕಳ ಸಾಹಿತ್ಯದ ಪರಿಚಾರಕ, ಮಕ್ಕಳ ಸಾಹಿತಿಗಳ ಸಂಘಟಕ, ಮಕ್ಕಳ ಸಾಹಿತ್ಯ ರಚನೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಪಡೆದಿರುವ ಲೇಖಕ, ವಿಮರ್ಶಕ ಆನಂದ ವಿ. ಪಾಟೀಲ ಅವರು ಸಂಪತ್ ಬೆಟ್ಟಗೆರೆ ಅವರ ಈ ಮೇಲಿನ ಕೃತಿಗೆ "ಮಕ್ಕಳ ಸಾಹಿತ್ಯ ಓದು ಒಲವು" ವಿಶೇಷ ಸಂಚಿಕೆಯಲ್ಲಿ ಬರೆದಿರುವ ಅವಲೋಕನಾತ್ಮಕ ಲೇಖನವಿದು. ಓದಿ ಅನಿಸಿಕೆ ತಿಳಿಸಿ. 
(ಓದಿನ ಸ್ಟಷ್ಟತೆಗಾಗಿ ಲೇಖನದ ಫೋಟೋ ಪೇಜ್ ಮೇಲೆ ಟಚ್ ಮಾಡಿ ಜೂಮ್ ಮಾಡಿಕೊಂಡು ಓದಿರಿ.)